ದೂರವಾಗುವ ಕ್ಷಣಗಳು ಯಾಕಿಷ್ಟು ಸುಂದರ?!
ಗೊತ್ತೆ ಆಗ್ಲಿಲ್ಲ ಆಲ್ರೆಡಿ ಮೂರುವರೆ ವರ್ಷ ಆಯ್ತು, ಇನ್ನೂ ನೆನ್ನೆ ಮೊನ್ನೆ ಮೈಸೂರ್ಗೆ ಬಂದಗ್ ಇದೆ. ಎಲ್ಲಿಂದ ಶುರು ಮಾಡ್ಲಿ ಅಂತನೆ ಗೊತ್ತಾಗ್ತಿಲ್ಲ, ಈ ಮೂರ್ ವರ್ಷದ ನೆನಪ್ನ ಮೂರ್ ಪುಟದಲ್ಲಿ ಇಳ್ಸಕ್ ಆಗುತ್ತಾ!?
ನಾನು ಇಂಜಿನೀಯರಿಂಗ್ ಸಲುವಾಗಿ ಮೈಸೂರಿಗೆ ಬಂದಿದ್ದು, ಎಲ್ರೂ ಇಂಜಿನೀಯರಿಂಗ್ ಅಂತ ಬೆಂಗ್ಳೂರಿಗೆ ಹೋಗ್ತಿದ್ರೆ ನಾನ್ ಒಬ್ಳೆ ಮೈಸೂರ್ ಕಡೆಗೆ ಬಂದಿದ್ದು, ಹಾಗ್ ನೋಡುದ್ರೆ ನಮ್ಮೂರ್ಗೆ ಬೆಂಗ್ಳೂರೆ ಹತ್ರ. ಎಲ್ರಿಗೂ ಮೈಸೂರು ಅಂದ್ರೆ ಸ್ಪೆಷಲ್ ಪ್ಲೇಸ್ ಅಲ್ವಾ ?! ಹೇವನ್ ಪ್ಲೇಸ್ ತರನೇ. ನಮ್ ತಾಯಿ ಅವ್ರ್ ತಂಗಿ ಅಂದ್ರೆ ನನಿಗ್ ಆಂಟಿ ಅವ್ರ್ ಮೈಸೂರಲ್ಲಿದ್ರು, ನಾವ್ ಚಿಕ್ಕೊರಿದ್ದಾಗ ಎರಡ್ ಮೂರ್ ಸಲ ಬಂದಿದ್ ಉಂಟು ಆದ್ರೆ ಜಂಬೂಸವಾರಿ ನೋಡೋ ಸೌಭಾಗ್ಯ ಮಾತ್ರ ಸಿಕ್ಕಿರ್ಲಿಲ್ಲ.
ನಾನ್ ಆಂಟಿ ಮನೆಯಿಂದ ಕಾಲೇಜಿಗೆ ಓಡಾಡೋದು ಅಂತ ಆಯ್ತು. ಹೊಸ ಜಾಗ, ಹೊಸ ಜನ, ಹೊಸ ಕಾಲೇಜು ಒಂಚೂರ್ ಭಯಯಿತ್ತು.ಎಷ್ಟೊ ಸಲ ಅನ್ಸೊದು ಸುಮ್ನೆ ನಮ್ಮೂರಲ್ಲೆ ಸಿಗೋ ಕೋರ್ಸ್ಗೆ ಹೋಗೋದ್ ಬಿಟ್ಟು ಇಲ್ಲಿಗ್ ಬರೋದ್ ಬೇಕಿತ್ತಾ? ಅಂತ.
ಫಸ್ಟ್ ಡೇ ಕಾಲೇಜು, ನಮ್ ಕಾಲೇಜ್ಗೆ ಹೋಗ್ಬೇಕಂದ್ರೆ ಎರಡ್ ಬಸ್ ಚೇಂಜ್ ಮಾಡ್ಬೇಕು. ಸ್ಟಾರ್ಟಿಂಗ್ ಒಂದೆರಡು ದಿನ ಕನ್ ಪ್ಯೂಸಿಂಗ್ ಯಾವ್ ಸರ್ಕಲ್ , ಎಲ್ಲಾ ಸರ್ಕಲ್ ಒಂದೆ ತರ ಕಾಣುತ್ತೆ, ಹೋಗೋಕ್ಕೊಂದ್ ದಾರಿ, ಬರಕ್ಕೊಂದ್ ದಾರಿ, ರೈಲ್ವೆ ಸ್ಟೇಷನ್ ಒಂದ್ಕಡೆ, ಸಿಟಿ ಕಡೆಗೆ ಹೋಗ ಬಸ್ ಒಂದ್ಕಡೆ, ಬೇರೆ ಜಿಲ್ಲೆಗೆ ಹೋಗೋ ಬಸ್ ಸ್ಟ್ಯಾಂಡ್ ಒಂದ್ ಕಡೆ.
ಕಾಲೇಜ್ ಅಲ್ಲಿ ಇಂಡಕ್ಷನ್ ಪ್ರೊಗ್ರಮ್ ಸ್ಟಾರ್ಟ್ ಆಗಿ ಮುಗ್ಯೋವಷ್ಟರಲ್ಲಿ, ಹಾಗೋ ಹೇಗೋ ೪/೫ ಜನ ಫ್ರೆಂಡ್ಸ್ ಆದ್ರೂ ,ನನ್ ಫ್ರೆಂಡ್ಸ್ ಹಿಸ್ಟರಿಯಲ್ಲಿ ಇದೆ ಜಾಸ್ತಿ. ಎಲ್ಲಾ ಕ್ಲಾಸ್ ಅಲ್ಲೂ ಇದೆ ಗೋಳು ಬಲ್ಗಡೆ, ಎಡ್ಗಡೆ ಕೂತಿರರಷ್ಟೆ ಪಕ್ಕ ಫ್ರೆಂಡ್ಸ್ ಆಗ್ತಿದ್ದು. ಯಾವ್ ಸರ್ಕಲ್ ಅಲ್ಲಿ ಯಾವ್ ಒಡೆಯರ್ ಸ್ಟಾಚ್ಯು ಇದೆ ಅನ್ನೊದು ಅಷ್ಟ್ ಗೊತ್ತಾಗ್ತಿರ್ಲಿಲ್ಲ, ಇಂಟರ್ನೆಟ್ನಲ್ಲಿ ಏನು ಉಪಯೋಗ ಆಗ್ಲಿಲ್ಲ. ನನ್ ಫ್ರೆಂಡ್ಸ್ನ ಕೇಳ್ತಿದ್ರು ಅವು ನೆಟ್ಟುಗ್ ಹೇಳ್ತಿರ್ಲಿಲ್ಲ. ಒಬ್ಳು ಫ್ರೆಂಡ್ನ ಕಾಡಿ ಬೇಡಿ, ಅವ್ಳನ್ನ ಸಿಟಿ ಕಡೆ ಕರ್ಕೊಂಡ್ ಹೋಗಿ ಆ ಕೆಳ್ಗಡೆ ಹೆಸ್ರು ಬರ್ದಿರ್ತರಲ್ಲ ಅದುನ್ ನೋಡಿ ಗೊತ್ ಮಾಡ್ಕೊಂಡಿದ್ ಆಯ್ತು.
ನಾನ್ ಇದಿದ್ದು ಆಂಟಿ ಮನೆ ಚಾಮುಂಡಿ ಬೆಟ್ಟಕ್ಕೆ ಹತ್ರ, ಯಾರ್ ನೆಂಟ್ರೂ ಬಂದ್ರೂ, ಯಾರೇ ಫ್ರೆಂಡ್ಸ್ ಬಂದ್ರೂ ಮನೆ ಮಂದಿಯಲ್ಲಾ ಬೆಟ್ಟಕ್ಕೆ ಹಾಜರಿ. ಈ ಮೂರುವರೆ ವರ್ಷದಲ್ಲಿ ನಾನು ಅರ್ಧ ವರ್ಷಬೆಟ್ದಲ್ಲೆ ಇದ್ಬಿಟ್ಟಿದಿನಿ. ಮೊಸ್ಟ್ ಫ್ರಿಕ್ವೆಂಟ್ಲಿ ವಿಸಿಟೆಡ್ ಪ್ಲೇಸ್ ಪಟ್ಟಿಯಲ್ಲಿ ಅಗ್ರಸ್ಥಾನ ಬೆಟ್ಟನೆ. ಒಂದ್ ಮಾತ್ರ ಹೇಳಬಲ್ಲೆ ರಾತ್ರಿ ಹೊತ್ತು ಬೆಟ್ದಿಂದ ಮೈಸೂರ್ನ ನೋಡೋದೆ ಚೆಂದ, ಅದುನ್ನ ನೀವ್ ಕಣ್ಣಾರೆ ನೋಡಬೇಕು.
ಬೆಳ್ಳಂಬೆಳಗ್ಗೆ ಎದ್ದಿ ಬಾಲ್ಕನಿ ಕಡೆ ಹೋದ್ರೆ, ಮಂಜು ಮಸುಕಿನ ನಡುವೆ ಕಾಣೋ ಬೆಟ್ಟ , ಎಷ್ಟು ತಂಪನೆ ಗಾಳಿ ಅಂತಿರಾ? ಕಾಲೇಜ್ಗೆ ರೆಡಿಯಾಗಿ, ಬೆಟ್ದಿಂದ ಬಾರೋ ಬಸ್ನಲ್ಲಿ ಅತ್ತಿ, ಬಸ್ ತುಂಬಾ ಈಗ್ ತಾನೆ ದರ್ಶನ ಮಾಡ್ಕೊಂಡು ಬಂದಿರೋರು ಅದ್ರಲ್ಲೂ ಬೇರೆ ಬೇರೆ ಸ್ಟೇಟ್,ಡಿಸ್ಟ್ರಿಕ್ಟ್ ಬಂದಿರೋ ಜನಗಳನ್ನ ನೋಡ್ದಾಗ ಬೆಟ್ಟುಕ್ಕೆ ಹೋಗ್ ಬಂದಷ್ಟೆ ಖುಷಿ.ಒಂದ್ ಬೇಜಾರ್ ಅಂದ್ರೆ ಈ ಆಷಾಡ ಟೈಮಲ್ಲಿ ಸಿಕ್ಕಾಪಟ್ಟೆ ಜನ, ಬೆಟ್ಟದ್ ಕಡೆ ಹೋಗ್ಬೇಕಾದ್ರೆ ಸಿಗೋ ಏರಿಯಾ ಕಡೆ ಹೇವಿ ರಷ್, ಲೋಕೋಲೆಟ್ಸ್ಗೆ ಬಸ್ಸಲ್ಲಿ ಓಡಾಡಕ್ಕೆ ಅರಸಾಹಸ ಪಡ್ಬೇಕು. ಅದ್ರಲ್ಲೂ ಶುಕ್ರವಾರ ಬಂದ್ರಂತು ಕೇಳ್ಬೇಕಾ? ಇನ್ನೂ ಜನ .ಆಷಾಡ ಶುಕ್ರವಾರದಲ್ಲಿ ನಮ್ ಏರಿಯಾ ಮುಖಾಂತರ ಬಸ್ ಹೋಗ್ತಿರ್ಲ್ಲಲ್ಲ, ಅಲ್ಲೆ ಜಾಕಿ ಕ್ವಾರ್ಟರ್ಸ್ ಅಂತ ಇತದೆ ಅಲ್ಲಿಳಿದು ನಮ್ ಏರಿಯಾ ನೆಡ್ಕೋಂಡು ಹೋಗ್ಬೇಕಿತ್ತು. ಈ ವಿ.ಐ.ಪಿ ಗಳೆನಾದ್ರೂ ಬಂದ್ರೆ ಅವ್ರು ಖಾಲಿ ಆಗೋವರ್ಗು ಬಸ್ ಬಿಡ್ತಿರ್ಲಿಲ್ಲ . ಇನ್ನ ದಸರಾ ನೆನುಸ್ಕೊಂಡ್ರೆ ಯಾಕಾದ್ರೂ ಈ ಟೈಂಲ್ಲಿ ಕಾಲೇಜ್ ಇಟ್ಟಿದರೆ ಅನ್ಸದ, ರಾತ್ರಿ ಲೈಟಿಂಗ್ ನೋಡಕ್ ಜನ ಬರ್ತಾರೆ ಅಂತ ಸಂಜೆ ಮೇಲೆ ಎಲ್ಲಾ ಬಸ್ ಸ್ಟಾಪ್ ಚೇಂಜ್ ಅದೊಂತರ ಹಿಂಸೆ ದಸರಾ ಅಂತ ಎಲ್ಲಿಂದಲೋ ಜನಗಳು, ಟ್ರಾಫಿಕ್, ಸಿಟಿಯಲ್ಲ ಗಿಜಿಗಿಜಿ ಈ ಮಧ್ಯೆ ನಾವು ಬಸ್ ಹುಡ್ಕೊಂಡು ಮನೆಗೆ ಹೋಗವಷ್ಟರಲ್ಲಿ ನಮ್ ಹೆಣ ಬಿದ್ದಿರದು. ಹೇಗೋ ಮೈಸೂರಿಗ್ ಬಂದಿದ್ಕೆ ಎರಡ್ ಸಲ ದಸರಾ ನೋಡೋ ಭಾಗ್ಯ ಸಿಗ್ತು.
ನಮ್ ಏರಿಯಾದಿಂದ ಬೆಟ್ಟುದ್ ಗಾಡಿ ಬಸ್ ಹತ್ತುದ್ರೆ, ಮುಂದಿನ್ ಸ್ಟಾಪ್ ಜಾಕಿ ಕ್ವಾರ್ಟರ್ಸ್ ಅಲ್ಲೆನೆ ಪೋಲಿಸ್ ಕ್ವಾರ್ಟರ್ಸ್ ಕೂಡ ಇರೋದು, ಸ್ವಲ್ಪ ಮುಂದುಕ್ ಹೋದ್ರೆ ಪೋಲಿಸ್ ಫಿಲ್ಡ್ ಸಿಗುತ್ತೆ, ನನಿಗ್ ಪೋಲಿಸ್ ಡಿಪಾರ್ಟ್ಮೆಂಟ್ ಅಲ್ಲಿ ಸೋರ್ಕಳ ಬಾಳ್ ಆಸೆಯಿತ್ತು , ಆದ್ರೆ ಹೈಟೆ ಪ್ರಾಬ್ಲಮ್ ನೋಡ್ದಾಗೆಲ್ಲಾ ಅದೆ ರಿಗ್ರೆಟ್ ಆದ್ರೂ ಹುಡ್ಗಿರ್ನ ಪೋಲಿಸ್ ಯುನಿಫಾರ್ಮ್ ನಲ್ಲಿ ನೋಡಕ್ ಸಕ್ಕತ್ತಗಿರುತ್ತೆ. ಹಾಗೇ ಮಂದುಕ್ ಹೋದ್ರೆ ಸಿಗೋದೆ ಝೂ ಹೋಗ್ತಾ ಬರ್ತಾ ಜಿರಾಫೆಗೆ ಹಾಯ್ ಬಾಯ್ ಹೇಳೋದ್ನ ಮರಿಬೋದೆ.ಬಸ್ ಅಲ್ಲೆ ಕೂತು ನೀಟಾಗೆ ಜಿರಾಫೆ, ಒಂದೆರೆಡು ಪಕ್ಷಿ ನೋಡ್ಬೋದು.ಅಲ್ಲಿಂದ ಮುಂದಿನ್ ಸ್ಟಾಪ್ ಆರ್ ಗೇಟ್, ಇಳ್ದು ನಮ್ ಕಾಲೇಜ್ ಬಸ್ ಸಿಕ್ತಿತ್ತು ಇಲ್ಲ ಅಂದ್ರೆ ಸಿಟಿ ಗಾಡಿನೆ ಗಟ್ಟಿ.
ಇನ್ನೊಂದ್ ವಿಷ್ಯ ಹೇಳ್ಲೇ ಬೇಕು ನಮ್ ಆಂಟಿ ಗ್ಯಾಂಗ್ ಬಗ್ಗೆ, ಅದೇನ್ ಒಗ್ಗಟ್ಟು ಅಂತಿರಾ ಆ ಒಗ್ಗಟ್ಟು ಬರಿ ಟ್ರಿಪ್ ಹೋಗೋವರ್ಗು ಮಾತ್ರ, ಪ್ರತಿ ಟ್ರಿಪ್ ಆದ್ಮೇಲು ಒಂದ್ ಡಿಸ್ಕ್ ಶನ್ ಮುಂದಿನ ಟ್ರಿಪ್ ನಾವೇ ಹೋಗೋಣ ಸುಮ್ಕಿರಮ್ಮ ಅಂತ ಮಾತಾಡ್ಕೋಳ್ಳೋದು. ನೋಡುದ್ರೆ ಮೂರನೆ ಮಹಾಯುದ್ಧ ನಡೆದೆ ಹೋಗುತ್ತೆ ಅನ್ನೋ ರೇಂಜ್ಗೆ ಶೀತಲ ಸಮರ ಇನ್ನೋಂದ್ ಟ್ರಿಪ್ ನಲ್ಲಿ ಜೇನುಗೂಡು ನಾವೆಲ್ಲ ಅಂತ ಅನ್ಕೊಂಡು ಹೋಗೊರು. ನಮ್ ಆಂಟಿ ದೆಸೆಯಿಂದ ಕೆಲವೊಂದು ಪ್ಲೆಸ್ ನೋಡೋಂಗ್ ಆಯ್ತು, ಇಲ್ಲ ಅಂದ್ರೆ ಅದು ಇರುತ್ತಿರಲಿಲ್ಲ. ಸಾಮಾನ್ಯವಾಗಿ ಈ ಹೆಣ್ಮಕ್ಕಳು ಅದಿಲ್ಲ ಇದಿಲ್ಲ ಅಂತ ಕೊರುಗ್ತನೆ ಇರ್ತರೆ, ಅಕ್ಕ ತಂಗಿಗಳಲ್ಲಿ ನೋಡುದ್ರೆ ಈ ಆಂಟಿದೆ ಸ್ವಲ್ಪ ಸಮಸ್ಯೆ ಇರೋದು. ನಾ ಯಾವತ್ತು ಆಂಟಿ ಕೊರುಗ್ಕೊಂಡು ಅದಿಲ್ಲ ಇದಿಲ್ಲ ಅಂತ ನೋಡಿದ್ದೆ ಇಲ್ಲ, ಇರೋದ್ರಲ್ಲಿ ಅದೆಷ್ಟು ಪರಮ ಸುಖಿ ಯಾಗಿದ್ರು.
ನಮ್ ಮನೆ ಟೆರೇಸ್ ಮೇಲೆ ಹೋಗಿ ಸೂರ್ಯಾಸ್ತ ನೋಡದ್ ಅಂದ್ರೆ ಬಾಳ ಪ್ರೀತಿ. ನಾನು, ತಮ್ಮ, ಮೇಲ್ಗಡೆ ಮನೆ ಅಕ್ಕ ಹೋಗ್ತಿರ್ತಿವಿ. ಒಂದ್ ಮಾತಲ್ಲಿ ಹೇಳೋದಾದ್ರೆ ಮೈಸೂರ್ ಸಿಟಿಯ ಪಕ್ಷಿನೋಟ ನೋಡ್ಬೋದು. ಒಂದ್ ಕಡೆ ಲಲಿತ್ ಮಹಲ್, ಇನ್ನೊಂದ್ ಕಡೆ ಬೆಟ್ಟ, ಮತ್ತೊಂದ್ ಕಡೆ ಮೈಸೂರ್ ಪ್ಯಾಲೇಸ್ ಕಾಣ್ತಿದ್ವು, ಇವೆಲ್ಲಾ ನೋಡೊದಂದ್ರೆ ಸಿರಿ. ನಾನ್ ನಮ್ಮೂರ್ ಫ್ರೆಂಡ್ಸ್ ಹತ್ರ ಮೈಸೂರ್ ಪ್ಯಾಲೇಸ್ ಎನ್ತ್ ಟೈಮ್ ನೋಡಿದಿನಿ ಅಂತ ಮೈಸೂರಲ್ಲಿರ್ದಕೆ ಬಿಗುಮಾನ ಪಟ್ಕೊಂಡು ಹೇಳ್ತಯಿದ್ದೆ.
ನನಿಗ್ ಮೈಸೂರಲ್ಲಿ ತುಂಬಾ ಇಷ್ಟ ಆಗೋ ಪ್ಲೇಸ್ ಅಂದ್ರೆ ಮೊದ್ಲಿಗೆ ಬೆಟ್ಟ, ಆಮೇಲೆ ಮೈಸೂರ್ ಪ್ಯಾಲೇಸ್ ರಾತ್ರಿಹೊತ್ತು ನೋಡದ್ ಇರೋದು ಕಣ್ಗೆ ದಣಿವೆ ಆಗಲ್ಲ ಬಿಡಿ, ದೊಡ್ಡಗಡಿಯಾರ, ಕುಕ್ಕರಹಳ್ಳಿ ಕೆರೆ. ಕೆರೆ ಒಳ್ಳೆ ಪ್ಲೆಸ್ ನಮ್ ಏರಿಯಾದಿಂದ ಸ್ವಲ್ಪ ದೂರನೇ ೨/೩ ಸಲ ಅಷ್ಟೇ ಹೋಗಿದ್ದು, ಪ್ರಕೃತಿನ ಸವಿಯೊಕ್ಕೆ ಒಂದೊಳ್ಳೆ ಜಾಗ, ಹಕ್ಕಿಗಳ ಪಿಸು ಸದ್ದು, ಜುಳುಜುಳು ನೀರಿನ ಶಬ್ಧ, ಅಚ್ಚ ಹಸುರಿಂದ ಕಾಣೋ ಗಿಡ ಮರಗಳು, ಕಣ್ಣಿಗೆ ತಂಪು ತಂಪು. ಇನ್ನೊಂದ್ ಈ ಝೂಯಿಂದ ಮಾಲ್ ಆಫ್ ಮೈಸೂರ್ಗೆ ಹೋಗೋ ದಾರಿ ಇದ್ಯಲ್ಲ ಜುಯ್ ಅಂತ ಹೋಗ್ಬೋದು, ಎಷ್ಟು ಸಕ್ಕತ್ ಇದೆ ಅಂತಿರಾ.
ಇನ್ನೊಬ್ಳು ಪಿ ಯು ಫ್ರೆಂಡ್ ಇದಳೆ ನಾನ್ ಏನೆ ಕವಿತೆ, ಕವನ, ಕತೆ ಬರಿತಿದ್ರು ಅವ್ಳಿಗೆ ಫಸ್ಟ್ ಕಳುಸ್ತಿದ್ದು , ಹೇಂಗನ ಇರ್ಲಿ ಅವ್ಳ್ ಮಾತ್ರ ಚೆನಾಗಿದೆ ಅಂತನೆ ಹೇಳ್ತಿದ್ಲು, ಇಷ್ಟ್ ದಿನಕ್ಕೆ ಕತೆ, ಕಾದಂಬರಿ ಓದೋ ಹುಡ್ಗಿ ಸಿಕ್ಕಿದ್ದು ಇವ್ಳೆನೆ. ಮೊಶ್ಟ್ ಆಫ್ ದಿ ಚಾಟ್, ಮಾತು ಕತೆ ಬುಕ್ಸ್ ಬಗ್ಗೆನೆ ಇರುತ್ತೆ ನಮ್ಮವಂತು. ಇನ್ನು ಇಷ್ಟ್ ವರ್ಷ ಆದ್ರೂ ಬುಕ್ನ ಎಕ್ಸ್ಚೇಂಜ್ ಮಾಡಕ್ ಆಗ್ತಿಲ್ಲ.
ಮೈಸೂರಲ್ಲಿ ಅಪರಿಚಿತ ಓದುಗರು ಅಂತ ಶುರು ಆಯ್ತು, ತಮಗಿಷ್ಟದ ಬುಕ್ನ ಪ್ರಕೃತಿಯ ನಡುವೆ ಓದಿ, ಕೃತಿಗಳ ಬಗ್ಗೆ ಮುಕ್ತವಾಗಿ ಓದಿದಪ್ರಸಂಗಗಳನ್ನ ಎಲ್ರಿಗೂ ಹಂಚ್ಕೊತಯಿದ್ರು. ಜೊತೆಗೆ ವಿಶೇಷ ವ್ಯಕ್ತಿಗಳನ್ನ ಅತಿಥಿಯಾಗಿ ಕರೆಸೀತ್ತಿದ್ದರು. ಸಣ್ಣ ವಯಸ್ಸಿನಿಂದ ದೊಡ್ಡ ವಯಸ್ಸಿನವ್ರು ಬರ್ತಿದ್ರು, ಅವರ ಅನುಭವ, ದೃಷ್ಟಿಕೋನ ಅವ್ರಲ್ಲಿದ್ದ ಜೀವನೋತ್ಸಾಹ, ಕುತೂಹಲ ನೋಡ್ತಿದ್ರೆ ನಾವೇ ಈ ವಯಸ್‌ಸಲ್ಲಿ ಇಷ್ಟೂ ನಿರುತ್ಸಾಹಿಗಳಾಗಿದಿವಿ ಅನ್ಸುತ್ತೆ. ಅಲ್ಲೊಂದಿಷ್ಟು ಹೊಸ ಜನ, ಹೊಸ ಸವಿಚಾರದ ಬಗ್ಗೆ ಪರಿಚಯವಾಯ್ತು.
ಇನ್ನ ನಮ್ ಫ್ರೆಂಡ್ಸ್ ಬಗ್ಗೆ ಹೇಳೋದಾದ್ರೆ ಒಂದೊಂದು ಮುತ್ತು ತಪಸ್ಸು ಮಾಡಿ ಪಡಿಬೇಕು. ಪ್ರತಿ ಬಾರಿ ಟ್ರಿಪ್ನ ಕ್ಯಾನ್ಸಲ್ ಮಾಡೋ ಕೀರ್ತಿ ನಮ್ಮ ಫ್ರೆಂಡ್ಸ್ಗೆ ಸಲ್ಲುತ್ತೆ. ಒಬ್ಳು ಸೀರೆ ಹುಚ್ಚಿ ಯಾವ್ ಲೆವಲ್ಗೆ ಅಂದ್ರೆ ಅವ್ರ್ ಮನೆಗೆ ಯಾವ್ದೆ ಹೊಸ್ದಾಗಿ ಸೀರೆ ಬಂದ್ರು ಅವ್ರ್ ಅಮ್ಮುಗಿಂತ ಮೊದ್ಲೇ ಅವ್ಳ್ ಸೀರೆ ಉಟ್ಟಿ ಮನೆತುಂಬಾ ಒಂದ್ಸಲ ಮೆರವಣಿಗೆ ಮಾಡುದ್ರೆ ಮನ್ಸಿಗೆ ಸಮಾಧಾನ. ಇನ್ನೊಬ್ಳು ಟಾಮ್ ಬಾಯ್ ತರ, ಅವ್ಳ್ ಪಕ್ಕ ಕ್ಲಾಸ್ ಕೂತಕಂಡ್ರೆ ಬರಿ ನಗ್ಸದೆ, ಅವ್ಳ್ ಜೋಕ್ ಮಾಡದ್ ಮಾಡಿ ಆದ್ರೆ ಟೀಚರ್ ಕೈಲಿ ಸಿಗಕೊಳ್ತಿದ್ದು ನಾವು. ಇನ್ನೊಬ್ಳು ತಂದೆ ತಾಯಿ ಹಾಕಿದ್ದ್ ಗೀಟ್ ದಾಟಲ್ಲ. ಇನ್ನೊಬ್ಳು ಇದಾಳೆ ಆಂಧ್ರ ಹುಡ್ಗಿ, ಅವ್ರ್ ಮನೇಲಿರೋ ಆರೋಗ್ಯ ಸಮಸ್ಯೆ ನೋಡುದ್ರೆ ಭಯ ಆಗುತ್ತೆ ಒಂದಲ್ಲಾ ಒಂದು ಏನಾದ್ರೂ ಇದ್ದೆ ಇರುತ್ತೆ. ನಾನ್ ನೋಡ್ದಂಗೆ ಇಂತದ್ದು ಮಾಡೋದು ಬರಂಗಿಲ್ಲ ಅಂತ ಏನಿಲ್ಲ. ಮಿಕ್ಕದ್ ಇನ್ನೊಬ್ಬಳು ನಾವಿಬ್ರೆ ಮನೆ ಸಿ.ಬಿ.ಯಸ್ ನ ಮುಖಾಂತರ ಹೋಗ್ಬೇಕಿತ್ತು, ನಾವಿಬ್ರು ಸಿ.ಬಿ.ಎಸ್ ಫ್ರೆಂಡ್ಸ್. ಸಿಂಗಲ್ ಪೇರೆಂಟ್ ಆಗಿದ್ರು ಯಾವ್ದಕ್ಕೂ ಕಮ್ಮಿ ಇಲ್ಲ ಅನ್ನೋ ಹಾಗೆ ಅವ್ರ್ ತಾಯಿ ಮೂರ್ ಜನ ಮಕ್ಕಳನ್ನ ನೋಡ್ಕೊತಿದರೆ.
ಇನ್ನು ಮೈಸೂರು ಸಂಜೆ, ದಿಗಂತದ ನೋಟ, ನೇಸರನ ವಿರಹದ ವಿದಾಯ, ಇನ್ನೂ ಚಾಮುಂಡಿ ಬೆಟ್ದಿಂದ ಸೂರ್ಯಾಸ್ತ ನೋಡ್ಬೇಕು, ಏನೋ ಈಡೀ ಮೈಸೂರು ನಗರವನ್ನೆ ಕೆಂಪು ಸೀರೆಯಿಂದ ಉಟ್ಟಿದ ಹಾಗೆ ಎಲ್ಲರ ಕಣ್ಮನ ತಣಿಸುತ್ತದೆ.
ಹೀಗೆ ಹೇಳ್ತನೆ ಇರ್ಬೊದು, ಕೊನೆದಾಗಿ ಒಂದ್ಸಲ ಇಷ್ಟವಾದ ಜಾಗಕ್ಕೆ, ಇಷ್ಟಪಡೋ ಜನ್ಗಳ್ ಜೊತೆ ಹೋಗ್ಬರ್ಬೇಕು. ಮೈಸೂರು ಅಂದ್ರೆ ಒಂದ್ ಕೈ ಪ್ರೀತಿ ಜಾಸ್ತಿನೆ ಮತ್ತೆ ಮತ್ತೆ ಹೀಗೆ ಸಿಗೋಣ.
ದೂರವಾಗುವ ಕ್ಷಣಗಳು ಯಾಕಿಷ್ಟು ಸುಂದರ?!
ಅದಕ್ಕೆನೋ ಬೀಳ್ಕೊಡುವ ನೇಸರನಿಗೂ ಅಷ್ಟೇ ಕಾತುರ
ವಿದಾಯದ ಹೊಸ್ತಿಲಲ್ಲಿ ಬಂದು ನಿಂತವಳಿಗೆ
ತನ್ನದಲ್ಲದ ಎಲ್ಲವುಗಳು ತನ್ನದಾಗುವುದೆನೋ
ಕೊನೆ ಬಾರಿ ಕಣ್ತುಂಬಿ ಕಂಬನಿ ಸುರಿಸಲು
ಸ್ಮೃತಿ ಪಲ್ಲಟದಲ್ಲಿ ಎಲ್ಲವೂ ಜೀವಂತವಾಗಿದೆ
ನನ್ನೂರಿನ ಗೆಳತಿಯರೊಂದಿಗೆ ಹಂಚಿ ಸವಿಯಲು
ಸುಮ್ಮನೆ ಬಾಯಲ್ಲಿ ಹೇಳಿದಂತೆ ದೂರವಾಗುವ ಕ್ಷಣಗಳು ಅಷ್ಟೂ ಸುಂದರವಾಗಿದ್ದರೆ;
ನೇಸರನು ಕಡು ಕೆಂಪಾಗಿ ಆಗಸದ ತುಂಬೆಲ್ಲಾ ರಕುತದ ಹೋಳಿ ಆಟ ಆಡದೆ ಸುಮ್ಮನೆ ಇದ್ದು ಬಿಡುವನೇ?



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ