ಮೊದಲ ಪತ್ರ
ಮೊದಲ ಪತ್ರ ಬರೆದ ನೆನಪಿನ್ನೂ ಹಾಗೆಯೇ ಹಸಿಯಾಗಿದೆ ಮುಂಜಾವಿನ ಇಬ್ಬನಿ ತಬ್ಬಿದ ಹೂವಿನ ಹಾಗೆ!
ಬಹುಶಃ ಮೂರು ಅಥವಾ ನಾಲ್ಕನೆ ಕ್ಲಾಸ್ ಇರ್ಬೇಕು "ಮಗಳಿಗೊಂದು ಪತ್ರ" ಅಂತ ಪಾಠಯಿತ್ತು. ಮನೆಲಿ ನಮ್ ತಂದೆ ಅವ್ರು ಹೇಳ್ಕೊಡ್ತ ಇದ್ರು ಮೊದ್ಲೆ ಮೇಷ್ಟ್ರು ಅದ್ರಲ್ಲೂ ವಿಜ್ಞಾನ ಟೀಚರ್ ಕೇಳ್ ಬೇಕಾ? ಮಕ್ಳಿಗೆ ಆದಷ್ಟೂ ಪ್ರಯೋಗಾತ್ಮಕವಾಗಿ ಹೇಳ್ಕೊಡ್ಬೇಕು ಅನ್ನೊ ಹುಚ್ಚು...
ನಮ್ ಅಪ್ಪ ತಡ ಮಾಡ್ಲೆ ಇಲ್ಲ .. "ಮಗಳೇ ಅಣ್ಣುಗಂದು ಪತ್ರ ಬರಿ"ಅಂದ್ರು..ಹಾಗಂತ ನಮ್ ಅಣ್ಣ ಏನ್ ದೇಶ ಬಿಟ್ಟೆನ್ ಹೋಗಿರ್ಲಿಲ್ಲ,ಮನೆಲೆ ಇದ್ರು. ಇನ್ನೇನ್ ಆಮೇಲೆ ,ಸ್ವಲ್ಪ ಹೊತ್ತು ನಮ್ ಅಣ್ಣುನ್ನ ಹೊರಕ್ ದಬ್ಬಿ, ಬರಿಲಿಕ್ಕೆ ಹೋದ್ವಿ. ಏನೋ ಒಂಥರಾ ಸಿಕ್ಕಾಪಟ್ಟೆ ಎಕ್ಸೈಟ್ಮೆಂಟ್ , ನಳ- ದಮಯಂತಿ , ಪಾರಿವಾಳ ಕತೆ ,ಅಂಚೆ ,ಪತ್ರ ಗಿತ್ರ ಅಂತ ಸುಮ್ನೆ ನಮ್ ಟೀಚರ್ ಬಾಯಲ್ ಕೇಳಿದ್ದು ,ಅದ್ ಹೇಗ್ ಬರ್ಯೋದು ,ಹೇಗ್ ತಲುಪ್ಸೋದು , ನೋಡಕ್ ಕಾರ್ಡ್ ಹೇಗ್ ಇರುತ್ತೆ.. ಏನೇನೋ ಕುತೂಹಲ ಕಾಡ್ತನೆ ಇದ್ವು.ಎಲ್ಲೊ ಅನಾಥವಾಗಿ ಕಪಾಟ್ನಲ್ಲಿ ಬಿದ್ದಿದ್ದ ಬ್ಯಾಗ್ ತೆರ್ದು ಪೋಸ್ಟ್ ಕಾರ್ಡ್ ಕೈ ಗಿಟ್ಟರು.
"ನಿಮ್ ಅಣ್ಣುಂಗೆ ಏನ್ ಹೇಳ್ ಬೇಕು ಕೇಳ್ ಬೇಕು ಬರ್ಯಮ್ಮ" ಅಂದ್ರು... (ನಿಜಾ ಏನ್ ಬರ್ದಿದ್ನೊ ನೆನ್ಪಿಲ್ಲಾ )..ನಮ್ ಅಪ್ಪನ ಸಹಾಯ ತಗೊಂಡು,ಏನೇನೋ ಚಿತ್ತಾರ ಮಾಡಿ ,ಬರ್ದಿದ್ದೆಲ್ಲ ಆಯ್ತು, ಅಡ್ರೆಸ್ ಏನ್ ಬರಿಲಿ ಅಂತ ಅಣ್ಣುನ್ ಸ್ಕೂಲ್ ಅಡ್ರೆಸ್ ಬರ್ದಿ,ಪೋಸ್ಟ್ ಬಾಕ್ಸ್ ಗೆ ಹಾಕೊದಂದೆ ಬಾಕಿ ಇದ್ದಿದ್ದು, ಮಾಮುಲಿ ನಮ್ ಅಣ್ಣಂದ್ರುನ್ನ ಸೂಕ್ಲ್ಗೆ ಬಿಡ್ಲಿಕ್ಕೆ ನಮ್ ಹಳ್ಳಿಯಿಂದ ತೋವಿನಕೆರೆ ಅಂತ ಹೋಗ್ಬೇಕಿತ್ತು..ತೀರಾ ಆ ಕಡೆ ಹಳ್ಳಿನೂ ಅಲ್ಲ ಈ ಕಡೆ ಸಿಟಿನೂ ಅಲ್ಲ ,ಅಲ್ಲೆ ಹೋಗ್ಬೇಕಿತ್ತು . "ಮಗಳೇ ಅಣ್ಣುಂಗ್ ಗೊತ್ತಾಗ್ದಲೆ ಪೋಸ್ಟ್ ಬಾಕ್ಸ್ ಗ್ ಹಾಕಿದಿನಿ,ಇನ್ನೇನ್ ೨/೩ ದಿನುಕ್ಕೆಲ್ಲಾ ಪೋಸ್ಟ್ ಹೋಗುತ್ತೆ"ಅಂದ್ರು...
ನನಿಗ್ ಅಂತೂ ಕುಂತಲ್ಲೆ ಕೂರ್ತಿರ್ಲಿಲ್ಲ ನಮ್ ಅಣ್ಣ ಏನ್ ಅಂತಾರೊ ಹೊಗ್ಳುತನ ಅಥವಾ ಹುಗ್ಳುತನ ....ಆ ದಿನ ಬಂತು ಕೂಡ ಬಂದಿದ್ದೆ ತಡ ಕಾರ್ಡ್ ತಾಂಡು ದೀಪೂದ್ ಗೋಡೆ ಮೇಲೆ ಇಟ್ಟಿ "ಏನ್ ಪತ್ರ ಬರ್ದಿದ್ಯಾ. ?" ಅಂದ,,ಹುಂ..ಅಂದಿ ಎಲ್ಲಿಗ್ ಬಂತ್ ಅಂದೆ.. "ಕ್ಲಾಸಿಗ್ ಬಂದ್ ಕೊಟ್ರು, ನಮ್ ಮಾಷ್ಟ್ರು ಏನಪ್ಪಾ ನಿನ್ ತಂಗಿ ಹಾಸ್ಟೆಲ್ಗಿದರಾ ಅಂತಾ ಕೇಳಿದ್ರ ಅಂತಾ ಹೇಳ್ದ...(ಅಷ್ಟೇ ಕೂಡ ನನಿಗ್ ಮಾತಾಡಿರೊದ್ ನೆನ್ಪಿರೊದು)
ನಿಜಾ ಊರಲ್ಲಿದ್ದ ಆ ದಿನಗಳು ತುಂಬಾನೇ ಸೊಗಸಾಗಿದ್ವು...!ಜೊತೆಗೆ ಇಲ್ದೆ ಇರುವ್ಗಲೆ ಅಲ್ವಾ ಒಬ್ಬ ವ್ಯಕ್ತಿ ಆಗ್ಲಿ ,ಸ್ಥಳದ ಬಗ್ಗೆ ಮೌಲ್ಯ ಗೊತ್ತಾಗೊದು.ಇರೋ ಒಬ್ ತಂಗಿನೂ ರಾಖಿ ಕಟ್ಟಲ್ವಲ್ಲಾ ಅಂತ ಬೇಜಾರ್ ಮಾಡ್ಕೊಳ್ಳಕಿಂತ ಮಂಚೆ ಪೋಸ್ಟ್ ಮಾಡ್ಬೇಕು..

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ