ಲಾಕ್ ಡೌನ್ ಕತೆಗಳು
ನನ್ನಂತು ಇದ್ದಿದ್ದೆ ಯಾವಾಗ್ ಆನ್ಲೈನ್ ಕ್ಲಾಸ್ ಶುರು ಮಾಡ್ತಾರೊ, ನಾನ್ ಆಂಟಿ ಮನೆಗೋ, ಅತ್ತೆ ಮನೆಗೋ ಆನ್ಲೈನ್ ನ್ ಕ್ಲಾಸ್ ಕೇಳೊಕ್ಕೆ ವಲಸೆ ಹೋಗಿತ್ತಾನೆ ಇರ್ಬೇಕು..! ನಮ್ಮುರಲ್ಲೊ ಆ ಟವರ್ ಗಂಧವೇ ಇಲ್ಲ..!! ಆನ್ಲೈನ್ ಕ್ಲಾಸ್ ಕೇಳಕ್ಕೆ ಅರಸಹಾಸ ಪಡಬೇಕು. ಏನಾದ್ರೂ ಟೀಚರ್ ಗೂಗಲ್ ಕ್ಲಾಸ್ ರೂಮ್ ನಲ್ಲಿ ಕಳುಸಿ, ಆ ಕ್ಲಾಸ್ ರೂಮ್ ನಲ್ಲಿ ಕಳುಸ್ತ್ರಿ ಅಂದ್ರೆ ಆ ಗೂಗಲ್ ಕ್ಲಾಸ್ ನಲ್ಲಿ ಸುತ್ತಿ ಸುತ್ತಿ ಹೋಗೊವಷ್ಟರಲ್ಲಿ ನಮ್ಮ ತಲೆ ಸುತ್ತಕ್ಕೆ ಶುರು ಮಾಡಿರುತ್ತೆ.. ಈ ಕಷ್ಟವೇ ಬೇಡ ಅಂದು ನಾನು ನಮ್ಮ ಅಕ್ಕನ ಮನೆಗೆ ಹೋದೆ.ಈಗ ಮಳೆಗಾಲ ಆಗಿರುವದರಿಂದ ಬಾರಿ ಮಳೆ, ಹಳ್ಳಿ ಕಡೆ ಮಳೆ ಬಂದ್ರೆ. ಕರೆಂಟು ಟಾಟಾ ಬಾಯ್ ಬಾಯ್ ಎಂದು ವಿದಾಯ ಹೇಳ್ ಹೋಗುತ್ತೆ. !! ಇನ್ನೆನು ಅವತ್ತು ಆನ್ಲೈನ್ ನ್ ಕ್ಲಾಸ್ ಬಂಕ್,. ಮಳೆ ಬಂದ್ರೆ ಸಾಕು ಎಲ್ಲರ ಮೊಗದಲ್ಲಿ ಹರ್ಷಾ ಧಾರೆ..ನಾನು,ಅಕ್ಕ, ಅತ್ತೆ ಮಗಳು ಜೊತೆಗೆ ವಾಕ್ ಆದಂಗು ಆಗುತ್ತೆ ಹೊಲನು ನೋಡಂಗೆ ಆಗುತ್ತೆ ಅಂತ ಹೋಲಕ್ಕೆ ಹೋದ್ವಿ.. ಮಳೆ ಬಂದಾಗ ಕೇಳಬೇಕೆ..!!?ಸ್ವರ್ಗ! ಹಳೆದನ್ನಲ್ಲಾ ಕಳಚಿ ಹೊಸತನದಿಂದ ನಲಿದಾಡೋ ಗಿಡ ಮರಗಳು..!! ಇನ್ನೂ ನಿಲ್ಲದ ತುಂತುರು ಸೋನೆ ಮಳೆಯ ಹನಿಗಳು ಮೈ ಸೋಕುತ್ತಿದ್ದರೆ ಅದೇನೋ ಅವರ್ಣಿನೀಯ ಆನಂದ..!ಕೆರೆ,ಕಟ್ಟೆ ತುಂಬಿ ಹರಿಯೋ ಹೊಳೆ ಹಳ್ಳಗಳು., ನೋಡುಲು ಕಣ್ಣಿಗೆ ಹಬ್ಬ. ಹಳ್ಳ ಏನಾದ್ರೂ ಹರಿತಿದ್ರೆ, ಅಲ್ಲೇ ಆಟವಾಡಿ ಕುಣಿದು ಕುಪ್ಪಳಿಸಿ ಬಟ್ಟೆಯಲ್ಲಾ ಒ...