ಪೋಸ್ಟ್‌ಗಳು

ದೂರವಾಗುವ ಕ್ಷಣಗಳು ಯಾಕಿಷ್ಟು ಸುಂದರ?!

ಇಮೇಜ್
ಗೊತ್ತೆ ಆಗ್ಲಿಲ್ಲ ಆಲ್ರೆಡಿ ಮೂರುವರೆ ವರ್ಷ ಆಯ್ತು, ಇನ್ನೂ ನೆನ್ನೆ ಮೊನ್ನೆ ಮೈಸೂರ್ಗೆ ಬಂದಗ್ ಇದೆ. ಎಲ್ಲಿಂದ ಶುರು ಮಾಡ್ಲಿ ಅಂತನೆ ಗೊತ್ತಾಗ್ತಿಲ್ಲ, ಈ ಮೂರ್ ವರ್ಷದ ನೆನಪ್ನ ಮೂರ್ ಪುಟದಲ್ಲಿ ಇಳ್ಸಕ್ ಆಗುತ್ತಾ!? ನಾನು ಇಂಜಿನೀಯರಿಂಗ್ ಸಲುವಾಗಿ ಮೈಸೂರಿಗೆ ಬಂದಿದ್ದು, ಎಲ್ರೂ ಇಂಜಿನೀಯರಿಂಗ್ ಅಂತ ಬೆಂಗ್ಳೂರಿಗೆ ಹೋಗ್ತಿದ್ರೆ ನಾನ್ ಒಬ್ಳೆ ಮೈಸೂರ್ ಕಡೆಗೆ ಬಂದಿದ್ದು, ಹಾಗ್  ನೋಡುದ್ರೆ ನಮ್ಮೂರ್ಗೆ ಬೆಂಗ್ಳೂರೆ ಹತ್ರ. ಎಲ್ರಿಗೂ ಮೈಸೂರು ಅಂದ್ರೆ ಸ್ಪೆಷಲ್ ಪ್ಲೇಸ್ ಅಲ್ವಾ ?! ಹೇವನ್ ಪ್ಲೇಸ್ ತರನೇ. ನಮ್ ತಾಯಿ ಅವ್ರ್ ತಂಗಿ ಅಂದ್ರೆ ನನಿಗ್ ಆಂಟಿ  ಅವ್ರ್ ಮೈಸೂರಲ್ಲಿದ್ರು, ನಾವ್ ಚಿಕ್ಕೊರಿದ್ದಾಗ ಎರಡ್ ಮೂರ್ ಸಲ ಬಂದಿದ್ ಉಂಟು ಆದ್ರೆ ಜಂಬೂಸವಾರಿ ನೋಡೋ ಸೌಭಾಗ್ಯ ಮಾತ್ರ ಸಿಕ್ಕಿರ್ಲಿಲ್ಲ.  ನಾನ್ ಆಂಟಿ ಮನೆಯಿಂದ ಕಾಲೇಜಿಗೆ ಓಡಾಡೋದು ಅಂತ ಆಯ್ತು. ಹೊಸ ಜಾಗ, ಹೊಸ ಜನ, ಹೊಸ ಕಾಲೇಜು ಒಂಚೂರ್ ಭಯಯಿತ್ತು.ಎಷ್ಟೊ ಸಲ ಅನ್ಸೊದು ಸುಮ್ನೆ ನಮ್ಮೂರಲ್ಲೆ ಸಿಗೋ ಕೋರ್ಸ್ಗೆ ಹೋಗೋದ್ ಬಿಟ್ಟು ಇಲ್ಲಿಗ್ ಬರೋದ್  ಬೇಕಿತ್ತಾ? ಅಂತ.  ಫಸ್ಟ್ ಡೇ ಕಾಲೇಜು, ನಮ್ ಕಾಲೇಜ್ಗೆ ಹೋಗ್ಬೇಕಂದ್ರೆ ಎರಡ್ ಬಸ್ ಚೇಂಜ್ ಮಾಡ್ಬೇಕು. ಸ್ಟಾರ್ಟಿಂಗ್ ಒಂದೆರಡು ದಿನ ಕನ್ ಪ್ಯೂಸಿಂಗ್ ಯಾವ್ ಸರ್ಕಲ್ , ಎಲ್ಲಾ ಸರ್ಕಲ್ ಒಂದೆ ತರ ಕಾಣುತ್ತೆ, ಹೋಗೋಕ್ಕೊಂದ್ ದಾರಿ, ಬರಕ್ಕೊಂದ್ ದಾರಿ, ರೈಲ್ವೆ ಸ್ಟೇಷನ್ ಒಂದ್ಕಡೆ, ಸಿಟಿ ಕಡೆಗೆ ಹೋಗ ಬಸ್ ಒಂ...

ಲಾಕ್ ಡೌನ್ ಕತೆಗಳು

ಇಮೇಜ್
ನನ್ನಂತು ಇದ್ದಿದ್ದೆ ಯಾವಾಗ್ ಆನ್ಲೈನ್    ಕ್ಲಾಸ್ ಶುರು ಮಾಡ್ತಾರೊ, ನಾನ್ ಆಂಟಿ ಮನೆಗೋ, ಅತ್ತೆ ಮನೆಗೋ ಆನ್ಲೈನ್ ನ್ ಕ್ಲಾಸ್ ಕೇಳೊಕ್ಕೆ ವಲಸೆ ಹೋಗಿತ್ತಾನೆ ಇರ್ಬೇಕು..! ನಮ್ಮುರಲ್ಲೊ ಆ ಟವರ್ ಗಂಧವೇ ಇಲ್ಲ..!! ಆನ್ಲೈನ್  ಕ್ಲಾಸ್ ಕೇಳಕ್ಕೆ ಅರಸಹಾಸ ಪಡಬೇಕು. ಏನಾದ್ರೂ ಟೀಚರ್ ಗೂಗಲ್ ಕ್ಲಾಸ್ ರೂಮ್ ನಲ್ಲಿ ಕಳುಸಿ, ಆ ಕ್ಲಾಸ್ ರೂಮ್ ನಲ್ಲಿ ಕಳುಸ್ತ್ರಿ ಅಂದ್ರೆ ಆ ಗೂಗಲ್ ಕ್ಲಾಸ್ ನಲ್ಲಿ ಸುತ್ತಿ ಸುತ್ತಿ ಹೋಗೊವಷ್ಟರಲ್ಲಿ ನಮ್ಮ ತಲೆ ಸುತ್ತಕ್ಕೆ ಶುರು ಮಾಡಿರುತ್ತೆ.. ಈ ಕಷ್ಟವೇ ಬೇಡ ಅಂದು ನಾನು ನಮ್ಮ ಅಕ್ಕನ ಮನೆಗೆ ಹೋದೆ.ಈಗ ಮಳೆಗಾಲ ಆಗಿರುವದರಿಂದ ಬಾರಿ ಮಳೆ, ಹಳ್ಳಿ ಕಡೆ ಮಳೆ ಬಂದ್ರೆ. ಕರೆಂಟು ಟಾಟಾ ಬಾಯ್ ಬಾಯ್ ಎಂದು ವಿದಾಯ ಹೇಳ್ ಹೋಗುತ್ತೆ. !! ಇನ್ನೆನು ಅವತ್ತು ಆನ್ಲೈನ್ ನ್ ಕ್ಲಾಸ್ ಬಂಕ್,. ಮಳೆ ಬಂದ್ರೆ ಸಾಕು ಎಲ್ಲರ ಮೊಗದಲ್ಲಿ ಹರ್ಷಾ ಧಾರೆ..ನಾನು,ಅಕ್ಕ, ಅತ್ತೆ ಮಗಳು ಜೊತೆಗೆ ವಾಕ್ ಆದಂಗು ಆಗುತ್ತೆ ಹೊಲನು ನೋಡಂಗೆ ಆಗುತ್ತೆ ಅಂತ ಹೋಲಕ್ಕೆ ಹೋದ್ವಿ.. ಮಳೆ ಬಂದಾಗ ಕೇಳಬೇಕೆ..!!?ಸ್ವರ್ಗ! ಹಳೆದನ್ನಲ್ಲಾ ಕಳಚಿ ಹೊಸತನದಿಂದ ನಲಿದಾಡೋ ಗಿಡ ಮರಗಳು..!! ಇನ್ನೂ ನಿಲ್ಲದ ತುಂತುರು ಸೋನೆ ಮಳೆಯ ಹನಿಗಳು ಮೈ ಸೋಕುತ್ತಿದ್ದರೆ ಅದೇನೋ ಅವರ್ಣಿನೀಯ ಆನಂದ..!ಕೆರೆ,ಕಟ್ಟೆ ತುಂಬಿ ಹರಿಯೋ ಹೊಳೆ ಹಳ್ಳಗಳು., ನೋಡುಲು ಕಣ್ಣಿಗೆ ಹಬ್ಬ. ಹಳ್ಳ ಏನಾದ್ರೂ ಹರಿತಿದ್ರೆ, ಅಲ್ಲೇ ಆಟವಾಡಿ ಕುಣಿದು ಕುಪ್ಪಳಿಸಿ ಬಟ್ಟೆಯಲ್ಲಾ ಒ...

ಮೊದಲ ಪತ್ರ

ಇಮೇಜ್
ಮೊದಲ ಪತ್ರ ಬರೆದ ನೆನಪಿನ್ನೂ ಹಾಗೆಯೇ ಹಸಿಯಾಗಿದೆ ಮುಂಜಾವಿನ ಇಬ್ಬನಿ ತಬ್ಬಿದ ಹೂವಿನ ಹಾಗೆ! ಬಹುಶಃ ಮೂರು ಅಥವಾ ನಾಲ್ಕನೆ ಕ್ಲಾಸ್ ಇರ್ಬೇಕು "ಮಗಳಿಗೊಂದು ಪತ್ರ" ಅಂತ ಪಾಠಯಿತ್ತು. ಮನೆಲಿ ನಮ್ ತಂದೆ ಅವ್ರು ಹೇಳ್ಕೊಡ್ತ ಇದ್ರು ಮೊದ್ಲೆ ಮೇಷ್ಟ್ರು ಅದ್ರಲ್ಲೂ ವಿಜ್ಞಾನ ಟೀಚರ್ ಕೇಳ್ ಬೇಕಾ? ಮಕ್ಳಿಗೆ ಆದಷ್ಟೂ ಪ್ರಯೋಗಾತ್ಮಕವಾಗಿ ಹೇಳ್ಕೊಡ್ಬೇಕು ಅನ್ನೊ ಹುಚ್ಚು...  ನಮ್ ಅಪ್ಪ ತಡ ಮಾಡ್ಲೆ ಇಲ್ಲ .. "ಮಗಳೇ ಅಣ್ಣುಗಂದು ಪತ್ರ ಬರಿ"ಅಂದ್ರು..ಹಾಗಂತ ನಮ್ ಅಣ್ಣ ಏನ್ ದೇಶ ಬಿಟ್ಟೆನ್  ಹೋಗಿರ್ಲಿಲ್ಲ,ಮನೆಲೆ  ಇದ್ರು.  ಇನ್ನೇನ್ ಆಮೇಲೆ ,ಸ್ವಲ್ಪ ಹೊತ್ತು ನಮ್ ಅಣ್ಣುನ್ನ ಹೊರಕ್ ದಬ್ಬಿ, ಬರಿಲಿಕ್ಕೆ ಹೋದ್ವಿ. ಏನೋ ಒಂಥರಾ ಸಿಕ್ಕಾಪಟ್ಟೆ ಎಕ್ಸೈಟ್ಮೆಂಟ್ , ನಳ- ದಮಯಂತಿ , ಪಾರಿವಾಳ ಕತೆ  ,ಅಂಚೆ ,ಪತ್ರ ಗಿತ್ರ ಅಂತ ಸುಮ್ನೆ ನಮ್ ಟೀಚರ್ ಬಾಯಲ್ ಕೇಳಿದ್ದು ,ಅದ್ ಹೇಗ್ ಬರ್ಯೋದು ,ಹೇಗ್ ತಲುಪ್ಸೋದು , ನೋಡಕ್ ಕಾರ್ಡ್ ಹೇಗ್ ಇರುತ್ತೆ.. ಏನೇನೋ ಕುತೂಹಲ  ಕಾಡ್ತನೆ ಇದ್ವು.ಎಲ್ಲೊ ಅನಾಥವಾಗಿ ಕಪಾಟ್ನಲ್ಲಿ  ಬಿದ್ದಿದ್ದ ಬ್ಯಾಗ್ ತೆರ್ದು ಪೋಸ್ಟ್ ಕಾರ್ಡ್ ಕೈ ಗಿಟ್ಟರು.  "ನಿಮ್ ಅಣ್ಣುಂಗೆ ಏನ್ ಹೇಳ್ ಬೇಕು ಕೇಳ್ ಬೇಕು ಬರ್ಯಮ್ಮ" ಅಂದ್ರು... (ನಿಜಾ ಏನ್ ಬರ್ದಿದ್ನೊ  ನೆನ್ಪಿಲ್ಲಾ )..ನಮ್ ಅಪ್ಪನ ಸಹಾಯ ತಗೊಂಡು,ಏನೇನೋ ಚಿತ್ತಾರ ಮಾಡಿ ,ಬರ್ದಿದ್ದೆಲ್ಲ ಆಯ್ತು, ಅಡ್ರೆಸ್ ಏನ್ ಬರಿಲಿ  ಅ...

ವರುಣ ರಾಗ

ಇಮೇಜ್
ಅವಳೋ ಮಾತಿನ ಮಲ್ಲಿ....ಆದರೆ ಆ ಒಂದು ಭೇಟಿ ಮಾತ್ರ  ಅವಳನ್ನ ತೀರದ ಮೌನಕ್ಕೆ ಗುರಿಯಾಗಿಸಿತ್ತು. ಈ ಮೊದಲ ಭೇಟಿಯೇ ಕೊನೆಯ ಭೇಟಿ ಎಂದು ನೆನೆದಾಗಲೆಲ್ಲಾ ಅವಳ ಮನಸ್ಸು ಭಾರವೆನಿಸುತ್ತಿತ್ತು.ಆ ಕಾರಣಕ್ಕಾಗಿಯೇ ಯಾವುದಾದರೂ ಒಂದು ನೆಪ ಹೇಳಿ ಮುಂದುಡುತ್ತಲೆ ಇರುತ್ತಿದ್ದಳು. ಆಗಾಗ ವಾರಕ್ಕೊಮ್ಮೆ "ಯಾವಾಗ ಸಿಗುತ್ತಿರಾ?" ಎಂಬ ಅವನಿಂದ ಬರುವ ಸಂದೇಶವನ್ನು ಓದಿ,ದಿನ ಪೂರ ಖುಷಿ ಪಡುವ ಸಂದರ್ಭವನ್ನು ಕಿಂಚಿತ್ತು ಕಳೆದು ಕೊಳ್ಳಲು  ಅವಳಿಗೆ ಇಷ್ಟವಿರಲಿಲ್ಲ.ಹೀಗೆ ಒಂದೆರಡು ತಿಂಗಾಳಾಯಿತು , ಅವಳೆಷ್ಟು ದಿನ ನೆಪವೊಡ್ಡಿಯಾಳು, ಆ ಭೇಟಿಗೆ ಒಪ್ಪುವ ದಿನ ಅನಿವಾರ್ಯವಾಗಿ ಒದಗಿತು. ಅವಳಿಗೋ ಅವನನ್ನು ನೋಡಿ,ಮಾತಾನಾಡುವ ಖುಷಿ ಒಂದು ಕಡೆಯಾದರೆ, ಇದ ನಂತರ ಫೋನಾಗಲಿ, ಮೇಸೆಜ್ ಆಗಲಿ ಅವನಿಂದ ಬರುವುದಿಲ್ಲ ಎಂದಾಗ ಅವಳ ಮನ ವ್ಯಾಕುಲತೆಗೆ ತುತ್ತಾಗುತಿತ್ತು. ಆ ದಿನ ಅವಳಿಗೋ ಹೇಳ ತೀರದ ಆನಂದ, ಆಕೆ ಎಂದೂ ಕನ್ನಡಿ ಮುಂದೆ ನಿಂತ ಹುಡಿಗೆಯೇ ಅಲ್ಲ,ಅವತ್ಯಾಕೊ ಒಂಚೂರು ಸಿಂಗರಿಸಿಕೊಳ್ಳ ಮನಸ್ಸಾಯ್ತು, ಶುಭ್ರ ಬಿಳಿ ವಸ್ತ್ರದ ಮೇಲೆ ಹಸಿರು ಬಣ್ಣದ ಚಿತ್ತಾರದ ಚೂಡಿದರ್,ಹಣೆಯ ನಡುವಲ್ಲಿ ಕಂಡರೂ ಕಾಣದಂತಿರುವ ಬಿಂದಿ, ಆಗಾಗ್ಗೆ ಗಾಳಿಲಿ ಮುಂಗುರುಳನ್ನು ಸರಿಸಲ್ಲಿಕ್ಕೆ ಪುಡಿಗೂದಲು ಬಿಟ್ಟಿದ್ದಳು,ಇದಿಷ್ಟೇ ಅವಳ ಅಲಂಕಾರ.ಆ ದಿನ  ಸೂರ್ಯ ಮೋಡದ ಮರೆಯಲ್ಲಿ ಕಣ್ಣು ಮುಚ್ಚಾಲೆಯಾಡುತ್ತಿದ್ದ ಮಳೆ ಬರುವ ಎಲ್ಲಾ ಲಕ್ಷಣಗಳಿದ್ದವು.ಆಕೆ ಅವಳ ಮನೆಯಿಂದ ಬಸ್ ಹತ್ತ...